Monday, May 31, 2010

Sensational ಹಸೀ ಸುಳ್ಳು

Sensational ಹಸೀ ಸುಳ್ಳು ೧:

"ಸಾರ್, ಫೀಸು ಕೊಡೋದು ಇನ್ನೊಂದು ತಿಂಗಳು ಲೇಟಾಗುತ್ತೆ"



ಯಾಕಯ್ಯಾ?? ಕೊಡೋ ಮುನ್ನೂರು ರೂಪಾಯಿಗೆ ಈಗಾಗಲೇ ಎಷ್ಟು ಸತಾಯಿಸಿದ್ದೀಯ, ಇನ್ನೂ ಲೇಟಾ?



ಸರ್ ಅದೂ.... ನಾನು ನನ್ನ ಫ್ರೆಂಡ್ಸೂ ಸೇರಿ ಒಂದು ಬೈಕ್ ತಗೋತಿದೀವಿ. ಅದ್ಕೆ ದುಡ್ಡು ಬೇಕಿತ್ತು.



ಬೈಕಾ? ಯಾವುದು?

CBZ ಸಾರ್, ಆರು ಸಾವಿರಕ್ಕೆ ನಾವು ಆರುಜನ ಸೇರಿ ದುಡ್ಡು ಹಾಕಿ ತಗೋತಿದೀವಿ.



CBZ ನಾ? ಯಾರು ಕಳ್ಳ ಮಾರ್ತಿದ್ದಾನಾ ?



ಇಲ್ಲಾ ಸಾರ್. ಆ ಬೈಕಿನ ಓನರ್ ಆಕ್ಸಿಡೆಂಟ್ನಲ್ಲಿ ಸತ್ತೋದ್ನಂತೆ. ಆಮೇಲೆ ಆ ಬೈಕಿನ ಮನೆಯವರು ಮಾರಿಬಿಟ್ರಂತೆ. ತಗೊಂಡವ್ನೂ ಸತ್ತೋದ್ನಂತೆ. ಹೀಗೇ ಆರು ಸಲ ಆಗಿದ್ಯಂತೆ. ಅದಕ್ಕೇ ಕಡೇ ಓನರ್ ಕಡೆಯವ್ರು ಈಗ ಮಾರಾಟಕ್ಕಿಟ್ಟಿದ್ದಾರೆ. ಚೀಪಾಗಿ ಸಿಗ್ತಿದೆಯಲ್ಲಾ ಅಂತ ನಾವೆಲ್ಲಾ Share ಹಾಕಿ ತಗೋತಿದೀವಿ.



ಎಲ್ಲಿದ್ಯಂತೆ ಬೈಕು?



ಗೊತ್ತಿಲ್ಲ ಸಾರ್... ನನ್ Friend Friendಗೆ ಗೊತ್ತಂತೆ. ಹುಡುಕಿ ತಂದ್ ಬಿಡ್ತೀವಿ....



- ಈ ಸ್ಟೋರಿನ ನೀವೂ ನಿಮ್ Friend ಬಾಯಿಂದ ಕೇಳಿರ್ಬಹುದು ಅಲ್ವಾ ???



Sensational ಹಸೀ ಸುಳ್ಳು ೨:

ಸಾರ್ ರಿಲಾಯನ್ಸ್ ಫೋನ್ ತಗೊಂಡ್ಬಿಡಿ. ಒಂದ್ ಪೈಸಾ ಬಿಲ್ ಬರಲ್ಲ.



ಹೌದಾ? ಅದ್ಹೇಗೆ ?



"ಮಾತಾಡ್ರಿರೋವಾಗ ಸಿಮ್ ತೆಗದ್ ಬಿಟ್ರೇ ಕಾಲ್ ರಿಸೀವ್ ಮಾಡ್ದೋರ್ಗೇ ಬಿಲ್ ಬರತ್ತೆ"



- ನಾನು ಇನ್ನೂ ಯೋಚ್ನೆ ಮಾಡ್ತಿದೀನಿ. ಕಾಲ್ ಎಂಗೇಜ್ ಆಗಿರೋವಾಗ ಸಿಮ್ ತೆಗೆದು ಮಾತಾಡೋದು ಹೇಗೆ ? ಅದೂ ಸಿಡಿಎಂಎ ಫೋನಲ್ಲಿ ಅಂತ.

Sensational ಹಸೀ ಸುಳ್ಳು ೩:

"ಸಾರ್ ನಾನೊಬ್ರನ್ನ ಪರಿಚಯ ಮಾಡಿಸ್ತೀನಿ. ಅವ್ರಿಗೆ ಹೆಂಡ್ತಿ ಇಲ್ಲ. ಮಗ ಸ್ವಲ್ಪ ಮಂಕಾಗಿದ್ದಾನೆ. ಅವ್ನಿಗೆ ೧೦ನೇ ಕ್ಲಾಸ್ CBSE ಪಾಸ್ ಮಾಡಿಸ್ಬಿಟ್ರೆ ನಿಮ್ಗೆ ಒಂದು ಕಾರ್ Feesನಲ್ಲಿ ಸಿಕ್ಬಿಡತ್ತೆ"



ಒಂದು ವಾರ ಆದಮೇಲೆ: ರೀ ದಿವ್ಯಾನಂದ್, ಅದ್ಯಾರೋ Home tution ಬೇಕು ಅಂತಿದ್ರಲ್ಲ ?



ಸಾರ್ ಅದೂ ಹೆಂಡ್ತಿ ಸತ್ತ Feelingನಲ್ಲಿ ಗಂಡ ಕುಡ್ದೂ ಕುಡ್ದೂ ಹಾಸ್ಪಿಟಲೈಸ್ಡ್ ಆಗಿದ್ದಾರೆ. ಆ ಮಗನೂ Feelingನಲ್ಲಿದ್ದಾನೆ. Next year exam ಕಟ್ತಾನಂತೆ. ಅವ್ನು exam ಕಟ್ದಾತ ನಿಮ್ಗೇ ಹೇಳ್ತೀನಿ ಸಾರ್. Parking ವ್ಯವಸ್ಥೆ ಮಾಡ್ಕೊಂಬಿಡಿ. ನೀವ್ ಕೇಳಿದ ಬ್ರಾಂಡು, ಕಾರೇ Feesಊ



ಆ ಹುಡುಗ ಎಸ್ ಎಸ್ ಎಲ್ ಸಿ ಕಟ್ಟಿಲ್ವಂತೆ.

Sensational ಹಸೀ ಸುಳ್ಳು ೪:

ಹಲೋ ಏನ್ ಮಾಡ್ತಿದ್ದೀ ಈಗಾ??

ನಮ್ದೂಕೇ Research



ಹೌದಾ? MSc ಮಾಡಿಲ್ಲ ಅಲ್ವಾ?



ಅದು ಆಥರದ್ದು ಅಲ್ಲ, Personalಗೆ Researchuu.



೬ ತಿಂಗಳ ನಂತರ...



ಏನಾಯ್ತು Research ??

ಕೃಷ್ಣಾ... ಅದೂ Patent ಗೆ Submit ಮಾಡಿದ್ದೇ. Failureಗೆ ಆಗ್ಬಿಡ್ತು.



ಹೌದಾ, ಏನ್ Researchu?



ಅದೂ ಸಾಕ್ಸ್ ಗೆ ತೆಗೆದ್ರೆ ವಾಸ್ನೇಗೆ ಬರತ್ತಲ್ಲಾ... ಅದು ಬರದೇ ಇದ್ದಂಗೆ ನಮ್ದೂಕೆ Scentಗೆ ಕಂಡ್ ಹಿಡ್ದಿದ್ವಿ. Patent ಗೆ ಹಾಕಿದ್ವಾ... ಹಿಂದಿನ ದಿವ್ಸ ಯಾರೋ ಅದನ್ನೇ ಕಂಡ್ ಹಿಡ್ದ್ ಬುಟ್ಟವ್ರೆ... ಬೇಜಾರಾಗ್ಬುಟ್ಟೀ ಸುಮ್ನಗ್ ಬುಟ್ವಿ.



ಮುಂದೇನು?



ಅದೇ... ನಮ್ದೂಕೆ Researchಗೆ ಕಂಟೀನ್ಯು...



ಏನ್ ವಿಷ್ಯಾ??



ಅದೂ ಸ್ವಲ್ಪ Confidential



Next timeಗೆ Product ಜೊತೇಗೇ ಸಿಗಾನಾ ಅಯ್ತಾ?



ಅವನಿನ್ನೂ ಸಿಕ್ಕಿಲ್ಲ.



Sensational ಹಸೀ ಸುಳ್ಳು ೫

ನಾನ್ಯಾರೂಂತ ನಿಮ್ಗೆ ಗೊತ್ತಿಲ್ಲಾ. ನೀವ್ಯಾರೂಂತ ನಂಗೆ ಗೊತ್ತಿಲ್ಲ. ನಂಗೆ ಹುಶಾರಿಲ್ಲ. ದುಡ್ ಬೇಕು. ನಿಮ್ಗೆ Free message ಇದ್ರೆ ಇದನ್ನ Forward ಮಾಡಿ. ಮೊಬೈಲ್ ಕಂಪ್ನಿಯವ್ರು message ಗೆ ೧೦ ಪೈಸ ಕೊಡ್ತೀವಿ ಅಂತ ಒಪ್ಕೊಂಡಿದ್ದಾರೆ.

ಎಂಥಾ ದಾಸವಾಳ !!!

ಯಾವತ್ತಾದ್ರೂ ಆ ನಂಬರ್ರಿಗೆ ಕಾಲ್ ಮಾಡಿ ನೋಡಿ. No Reply!!

Sensational ಹಸೀ ಸುಳ್ಳು ೬

ದೇವ್ರು ಹೆಸರಲ್ಲಿ ಒಂದು ಶ್ಲೋಕ- ಇದನ್ನ ೨೧ ಜನಕ್ಕೆ Forward ಮಾಡಿ ಇಲ್ದಿದ್ರೆ ದೇವ್ರು ಶಾಪ ಕೊಡ್ತಾನೆ. ಇಂತಿಂತೋರ್ಗೆ ಹಿಂಗ್ ಹಿಂಗ್ ಆಯ್ತು. __ ಮಾಡ್ದೋರ್ಗೇ ಒಳ್ಳೇದಾಯ್ತು. ಮಾಡ್ದೇ ಇರೋರ್ಗೆ ಕೆಟ್ಟದ್ದಾಯ್ತು etc etc

ಭಕ್ತನನ್ನ ಶಪಿಸೋ ದೇವರನ್ನ ಮರೆಯೋದೇ ಒಳ್ಳೇದಲ್ವಾ ??

Tuesday, March 23, 2010

ನನ್ನ ಪ್ರಾಮಾಣಿಕತೆಗೆ ಬೆಲೆ ಸಿಗದೇ ಹೋದದ್ದು

ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಆವತ್ತು Head Master ಊರಲ್ಲಿರಲಿಲ್ಲ. ನಮ್ಮ ಜಯಮಿಸ್ಸು advantage ತಗೊಂಡು ಕ್ಲಾಸ್ ಬಿಟ್ಟು ಎಲ್ಲೋ ಹೊರ ಹೋಗಿದ್ದರು. ಹೋಗುವಾಗ ಕ್ಲಾಸ್ ಲೀಡರ್ ಬಸವಣ್ಣನಿಗೆ ಯಾರಾದ್ರೂ ಮಾತಾಡಿದ್ರೆ ಅವ್ರು ಬಂದಮೇಲೆ ಹೇಳೋಕೆ ಹೇಳಿದ್ರು. ನಾನು ತುಟಿಮೇಲೆ ಬೆರಳಿಟ್ಟು ತಲೆ ತಗ್ಗಿಸಿ ಕೂತೆ. (ಅದು Madam Instruction!!) ಬಹುಶಃ 1 ಘಂಟೆ ಕೂತಿದ್ದಿರಬಹುದು. ಒಂದೇ angle ನಲ್ಲಿ ಕೈ ಇಟ್ಟು ಕೈ ಎಲ್ಲಾ ನೋವು, ಕುತ್ತಿಗೆ ನೋವು . ಕ್ಲಾಸ್ ತುಂಬಾ ಗಲಾಟೆ. ಅಂತೂ ಜಯಾಮಿಸ್ ಬಂದ್ರು. ಅವರ ಸೀರೆಗೆ ತಕ್ಕ Matching blouse piece ಸಿಕ್ಕಿದ ಸಂತೋಷದಲ್ಲಿದ್ರು. ಬಸವಣ್ಣ ಕೂಗಿ ಕೂಗಿ ಹೇಳಿದ್ದು ಇನ್ನೂ ನೆನಪಿದೆ- "ವಿಸ್, ಕೃಷ್ಣ ಒಬ್ಬನ್ನ ಬಿಟ್ಟು ಎಲ್ರೂ ಮಾತಾಡಿದ್ರು". ಆದ್ರೆ ಮಿಸ್ ಯಾರಿಗೂ ಏನೂ ಮಾಡಲಿಲ್ಲ.

ನನ್ನ ಪ್ರಾಮಾಣಿಕತನಕ್ಕೆ ಅಂದು ಬೆಲೆ ಸಿಗದೇ ಹೋದದ್ದಕ್ಕೆ ಇಂದಿಗೂ ಬೇಸರವಿದೆ. ಆದರೆ ನಾನು ಬದಲಾಗಿಲ್ಲ !!!

ಒಮ್ಮೆ Try ಮಾಡಿ ನೋಡಿ

ಯಾವಾಗ್ಲಾದ್ರೂ Fresh ಆಗಿದ್ದಾಗ ಸುಮ್ನೆ ಏನೂ ಮಾಡದೇ ಅಂಗಾತ ಮಲಗಿ ನಿಮ್ಮ ದೇಹದ ಭಾಗಗಳನ್ನ ಮನಸಿಇನಲ್ಲೇ ಗಮನಿಸಿ. ಒಂದು 15 ನಿಮಿಷ ಹಾಗೇ ಇರಿ. ಬೇರೆ ಯಾವ ಯೋಚನೇನೂ ಮಾಡಬಾರದು. ಅದೊಂದು ಅಧ್ಬುತ ಅನುಭವ.

Thursday, March 18, 2010

ನನ್ನನ್ನು ಬಹುವಾಗಿ ಕಾಡಿದ ಕಥೆ

ಸಮುದ್ರತೀರದಲ್ಲಿ ಒಂದು ಹಳ್ಳಿ, ಆ ಹಳ್ಳಿಯಲ್ಲೊಂದು ಪುಟ್ಟ ಗುಡಿಸಲು. ಅದರಲ್ಲಿ ವಯಸ್ಸಾದ ತಾಯಿಯೊಡನೆ ಒಬ್ಬ ಸ್ಪುರದ್ರೂಪಿ ಯುವಕ ವಾಸವಿದ್ದ. ಹೊಟ್ಟೇಪಾಡಿಗೆ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ.

ಒಮ್ಮೆ ಮೀನು ಹಿಡಿಯುವಾಗ ಭಾರೀ ಅಲೆಗಳೆದ್ದು ಅವನು ನೀರಿನಲ್ಲಿ ಮುಳುಗಿದ. ಪಾತಾಳಲೋಕದ ಜನರು ಅವನನ್ನು ರಕ್ಷಿಸಿ ತಮ್ಮ ಲೋಕಕ್ಕೆ ಕೊಂಡೊಯ್ದರು. ಅಲ್ಲಿನ ರಾಜನ ಮಗಳಿಗೆ ಇವನ ಬಗ್ಗೆ ಮೋಹವಾಯ್ತು. ಅವಳ ತಂದೆಯ ಒಪ್ಪಿಗೆ ಸಿಕ್ಕಿ ಯುವಕನೊಡನೆ ಮದುವೆಯೂ ಆಯ್ತು.

ಬಹಳ ದಿನಗಳ ನಂತರ ಆ ಯುವಕನಿಗೆ ತನ್ನ ತಾಯಿಯ ನೆನಪಾಯ್ತು. ಒಮ್ಮೆ ಹೋಗಿ ನೋಡಿ ಬರುತ್ತೇನೆಂದ. ರಾಜಕುಮಾರಿ ಅವನ ಕೈಗೆ ಉಂಗುರ ತೊಡಿಸಿ ಭೂಲೋಕಕ್ಕೆ ಹೋದಾಗ ಯಾವ ಕಾರಣಕ್ಕೂ ಆ ಉಂಗುರವನ್ನು ಕೈನಿಂದ ತೆಗೆಯಬಾರದೆಂದು ಭಾಷೆ ಪಡೆದು ಬೇಗನೇ ಹಿಂದಿರುಗಬೇಕೆಂದು ಹೇಳಿ ಕಳುಹಿಸಿಕೊಟ್ಟಳು.

ಯುವಕ ತನ್ನೂರನ್ನು ಗುರುತು ಹಿಡಿಯದಾದ. ಅಲ್ಲಿ ಗುಡಿಸಲಿದ್ದ ಜಾಗದಲ್ಲಿ ದೊಡ್ಡ ಮನೆಯೊಂದನ್ನು ಕಟ್ಟಿದ್ದರು. ಪರಿಚಯದವರು, ಸ್ನೇಹಿತರು, ವಯಸ್ಸಾದ ತಾಯಿ ಯಾರೂ ಇರಲಿಲ್ಲ. ಆತ ಎಲ್ಲರೊಡನೆ ತಾಯಿಯ ಬಗ್ಗೆ ವಿಚಾರಿಸಿದ. ಆದರೆ ಆಕೆ ಸತ್ತು ಶತಮಾನಗಳೇ ಕಳೆದಿತ್ತು. ಯಾರಿಗೂ ಗುರುತು ಸಿಗಲಿಲ್ಲ. ಯುವಕ ಅಳತೊಡಗಿದ.

ಆ ಯುವಕನ ವ್ಯರ್ಥ ಪ್ರಲಾಪವನ್ನು ದೂರದಿಂದ ಗಮನಿಸುತ್ತಿದ್ದ ಪುಟ್ಟ ಹುಡುಗಿಯೊಬ್ಬಳನ್ನು ಅವನ ಕೈಲಿದ್ದ ಉಂಗುರ ಆಕರ್ಷಿಸಿತು. ಅವಳು ಅವನ ಬಳಿಗೆ ಬಂದು: ನಾನು ನಿನ್ನನ್ನು ಗುರುತಿಸಿದ್ದೇನೆಂದೂ, ನಿನ್ನ ತಾಯಿ ಸತ್ತು ವರುಷಗಳೇ ಆಯಿತೆಂದೂ ತಾನು ಅವನ ನೆಂಟರ ಹುಡುಗಿಯೆಂದೂ ತಿಳಿಸಿದಳು. ತನಗೆ ಬಡತನವಿರುವುದರಿಂದ ಆ ಉಂಗುರ ಕೊಟ್ಟರೆ ಅದನ್ನು ಮಾರಿ ಅಕ್ಕಿ ತರುತ್ತೇನೆಂದೂ ಬೇಡಿದಳು.

ಈಗಾಗಲೇ ಬೇಸರದಲ್ಲಿದ್ದ ಯುವಕ ಉಂಗುರ ಕಳಚಿ ಹುಡುಗಿಯ ಕೈಲಿಟ್ಟ. ಹುಡುಗಿ ತಡಮಾಡದೇ ಓಡತೊಡಗಿದಳು. ನೋಡ ನೋಡುತ್ತಿದ್ದಂತೆ ಆ ಯುವಕ ಹಣ್ಣು ಹಣ್ಣು ಮುದುಕನಾದ. ಉಂಗುರದ ಪ್ರಭಾವ ಹೋಗುತ್ತಿದ್ದಂತೆ ಅವನು ಎಲ್ಲ ಮನುಷ್ಯರಂತೆ ಮುಪ್ಪಾದ. ಕಷ್ಟ ಪಟ್ಟು ಕಿರುಚಿದ "ಏ ಹುಡುಗೀ..." ಅಷ್ಟರಲ್ಲಾಗಲೇ ಉಂಗುರ ಪಡೆದ ಹುಡುಗಿ ತನ್ನ ಮೋಸ ಫಲಿಸಿದ ಬಗ್ಗೆ ಸಂತೋಷ ಪಡುತ್ತಾ ಬಹುದೂರ ಓಡಿದ್ದಳು. ಮುದುಕನಾಗಿದ್ದ ಯುವಕ ಅಲ್ಲೇ ಸಾವನ್ನಪ್ಪಿದ್ದ....

ಮನ ಕಲಕುವ ಕಥೆ ಅಲ್ವಾ ? ಇಲ್ಲಿ ಯಾರು ಯಾರಿಗೆ ಅನ್ಯಾಯ ಮಾಡಿದರು ?

ಅವನನ್ನು ತನ್ನ ಬಳಿಯೇ ಉಳಿಸಿಕೊಂಡದ್ದು ರಾಜಕುಮಾರಿಯ ಸ್ವಾರ್ಥ. ಅಮ್ಮನನ್ನು ಮರೆತಿದ್ದು ಯುವಕನ ಸ್ವಾರ್ಥ. ಪರಿಚಯವಿಲ್ಲದ ಯುವಕನಿಗೆ ಕಥೆ ಕಟ್ಟಿ ಉಂಗುರ ಪಡೆದದ್ದು ಹುಡುಗಿಯ ಸ್ವಾರ್ಥ.

ಅಷ್ಟು ಚಿಕ್ಕ ಹುಡುಗಿಗೆ ಮೋಸಮಾಡುವ ಯೋಚನೆ ಬಂದದ್ದು Necessity. ಅವಳ ಬಡತನ ಅವಳಿಂದ ಆ ಕೆಲಸ ಮಾಡಿಸಿತು. ಇನ್ನು ರಾಜಕುಮಾರಿಯದ್ದು Conditional Love. ನನ್ನೊಡನೆ ನೀನಿರುವವರೆಗೂ ಯುವಕನಾಗಿಯೇ ಇರು ಎಂಬಾಸೆ.

ಯಾರಾದರೂ ನಿಮ್ಮ ಬಳಿ ಸಹಾಯ ಪಡೆಯಲು ಬಂದಾಗ ಅವರನ್ನು ಪುಟ್ಟ ಹುಡುಗಿಯ ಸ್ಥಾನದಲ್ಲಿಟ್ಟು ನಿಮ್ಮನ್ನು Innocent ಯುವಕನ ಸ್ಥಾನದಲ್ಲಿಟ್ಟು ನೋಡಿ. ಕೆಲಸವಾಗುತ್ತಿದ್ದಂತೆ ಅವರು ಪುಟ್ಟ ಹುಡುಗಿಯಂತೆ ಓಡಿ ಮರೆಯಾಗುತ್ತಾರೆ. ನೀವು ಆ ಯುವಕನಂತೆ ಪಶ್ಚಾತ್ತಾಪ ಪಟ್ಟಿರುತ್ತೀರಿ.

ನಿಮ್ಮದು ಯಾರಬಗ್ಗೆಯಾದರೂ Conditional Love ಆಗಿದ್ದರೆ ಆ ಯುವಕನಂತೆ ಉಂಗುರ ಕೊಟ್ಟುಬಿಡಬೇಡಿ!!! ನನಗಂತೂ Sales person ಗಳನ್ನು ನೋಡಿದಾಗ, Insurence agent ಗಳನ್ನ ನೋಡಿದಾಗ, ಭಿಕ್ಷುಕರನ್ನು ನೋಡಿದಾಗ, ನೀ ನನಗೆ ಒಳ್ಳೇದುಮಾಡಿದರೆ ನಾ ನಿನಗೆ ಒಳ್ಳೆಯವನು ಎಂಬ ಮನಸ್ಥಿತಿಯಲ್ಲಿ ಸಹಾಯ ಕೋರಿ ಬರುವ ಪರಿಚಯದವರನ್ನು ನೋಡಿದಾಗ ಆ ಯುವಕ ನೆನಪಿಗೆ ಬರುತ್ತಾನೆ.

ನಾನು ಮನಸ್ಸಿನಲ್ಲೇ ಹೇಳಿಕೊಳ್ಳುತ್ತೇನೆ- ಉಂಗುರದ ಅವಶ್ಯಕತೆ ನನಗೇ ಹೆಚ್ಚು. ನಾನು ಉಂಗುರ ಕೊಡೋಲ್ಲ!!!

ನಿಮ್ಮ ಬಳಿ ಆ ಪುಟ್ಟ ಹುಡುಗಿ ಎಷ್ಟುಬಾರಿ ಯಾರ ಯಾರ ರೂಪದಲ್ಲಿ ಉಂಗುರ ಕೇಳುತ್ತಾ ಬಂದಿದ್ದಾಳೆ ಅಂತ ಪಟ್ಟಿಮಾಡಿ ನೋಡಿ, ಮುಂದೆ ಮೋಸಹೋಗುವ ಸಂಧರ್ಭ ಬರಲಾರದು!!!

Monday, February 22, 2010

ಈ-ಸಂದೇಶ

ಪಾತ್ರ ಪರಿಚಯ : ಪಚ್ಚು (ನನ್ನ ತಮ್ಮ-ಪ್ರಶಾಂತ)

ಬ್ಲಾಗಿಗೆ ಬರೆಯುವ
ಬಯಕೆಗೆ ಬಿದ್ದು ತಿಂಗಳೊಂಭತ್ತಾಯ್ತು!!!

ಪಚ್ಚು ಡಾಕ್ಟರ್ ರಿಂದ
ಸುಖ ಪ್ರಸವ; ಹೆತ್ತದ್ದಾಯ್ತು!!!

ಹುಟ್ಟಿದ ಕೂಸಿನ ಆರೈಕೆ
ಬೆಳೆಯುವ ಹಾಗೆ ಹಾರೈಕೆ

ನಿಮ್ಮ ಸುಖ ದುಃಖಗಳ ಹಂಚಿಕೆ
ಈಗ ನನ್ನ ಬಯಕೆ

ಬರೆಯೋದ್ ತುಂಬಾ ಕಷ್ಟ
ಅಂತ ಪರೀಕ್ಷೇಲೇ ನಿಮ್ಗೆ ಗೊತ್ತಾಗಿದೆ

ದಿನಾ ಬರೀ ಅಂತ ಮಾತ್ರ ಕೇಳ್ಬೇಡಿ
ಟೈಮ್ ಚುಟುಕಾಗಿದೆ

ಬರೆದಾಗಲೆಲ್ಲಾ ಓದಿ; ನಿಮ್ಮ
ಜೀವನದಿ ಅನುಭವಿಸಿ; ಮೆಲುಕು ಹಾಕಿ

ನಿಮ್ಮ ಅನಿಸಿಕೆಗಳ ಸಾರಾಂಶವ ತಿಳಿಸಲು
ನಮಗೊಂದು e-ಪತ್ರವ ಹಾಕಿ

ಕನಸಿದೆ ಒಂದು ಒಮ್ಮನಸಿನ
ಪ್ರಭೇದ ಕಟ್ಟಲು

ಬೇಕಿದೆ ಈ ಪ್ರಭೇದ
ಸಮಾಜವ ಉಳಿಸಲು

ಸಾಧ್ಯವಾಗದಿದ್ದರೂ ಸರಿ ಪ್ರಯತ್ನಿಸೋಣ
ಮರಳಿ ಯತ್ನವಮಾಡು ಮಂತ್ರವ ಹಾಡೋಣ.